ಎಸ್.ಎಸ್.ಎಲ್.ಸಿ ಪರೀಕ್ಷೆ

ಕ್ರ.ಸಂ. ಪರೀಕ್ಷೆ ಸದ್ಯದ ಸ್ಥಿತಿ
1 ಎಸ್.ಎಸ್.ಎಲ್.ಸಿ. ಜೂನ್/ಜುಲೈ 2020ರ ಪರೀಕ್ಷೆ - ಫಲಿತಾಂಶ ಪ್ರಕಟಿಸಲಾಗಿದೆ
2 ಕೆ.ಓ.ಎಸ್. ಜುಲೈ 2020ರ ಪರೀಕ್ಷೆಯನ್ನು ಮುಂದೂಡಲಾಗಿದೆ
3 ಡಿ.ಇ.ಎಲ್.ಇಡಿ 2020ರ ಪರೀಕ್ಷಾ ಅಧಿಸೂಚನೆಯನ್ನು ಹೊರಡಿಸಲಾಗಿದೆ
4 ಡಿ.ಪಿ.ಇಡಿ. 2020ರ ಪರೀಕ್ಷಾ ಅಧಿಸೂಚನೆಯನ್ನು ಹೊರಡಿಸಲಾಗಿದೆ
5 ವಾಣಿಜ್ಯ ಜನವರಿ-2020 ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ.
6 ಸಂಗೀತ 2020ರ ಪರೀಕ್ಷಾ ಅರ್ಜಿಗಳ ಪರಿಶೀಲನಾ ಕಾರ್ಯ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದೆ
7 ಗಣಕಯಂತ್ರ ಶಿಕ್ಷಣ ಫೆಬ್ರವರಿ 2020ರ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ
8 ಚಿತ್ರಕಲೆ ನವೆಂಬರ್ 2019ರ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ
9 ಅರೇಬಿಕ್ ಫೆಬ್ರವರಿ 2020ರ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ
10 ಚಲನಚಿತ್ರ ನಟನೆ 2020ರ ಪರೀಕ್ಷಾ ಅಧಿಸೂಚನೆಯನ್ನು ಶೀಘ್ರವೇ ಹೊರಡಿಸಲಾಗುವುದು
11 ರಂಗ ಶಿಕ್ಷಣ 2020ರ ಪರೀಕ್ಷಾ ಅಧಿಸೂಚನೆಯನ್ನು ಶೀಘ್ರವೇ ಹೊರಡಿಸಲಾಗುವುದು
12 ಎನ್.ಟಿ.ಎಸ್.ಇ. ಪರೀಕ್ಷೆ ಪೂರ್ಣಗೊಂಡಿರುತ್ತದೆ
13 ಎನ್.ಎಂ.ಎಂ.ಎಸ್. ಪರೀಕ್ಷೆ ಪೂರ್ಣಗೊಂಡಿರುತ್ತದೆ

1966 ರಲ್ಲಿ ಅಸ್ಥಿತ್ವಕ್ಕೆ ಬಂದಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಸಂಯೋಜಿತ ಶಾಲೆಗಳ 10ನೇ ತರಗತಿಯ ಮುಖ್ಯ ಪರೀಕ್ಷೆಯನ್ನು ನೆಡೆಸುವುದರ ಜೊತೆಗೆ ಸಂಗೀತ, ಡಿ.ಎಡ್, ವಾಣಿಜ್ಯದಂತಹ ಇತರೆ 12 ಪರೀಕ್ಷೆಗಳನ್ನು ನಿರ್ವಹಿಸುತ್ತಿದೆ. ಬೆಂಗಳೂರಿನಲ್ಲಿ ಮಂಡಳಿಯ ಮುಖ್ಯ ಕಛೇರಿಯಿದ್ದು ಬೆಳಗಾಂ, ಕಲಬುರ್ಗಿ ಮತ್ತು ಮೈಸೂರುಗಳಲ್ಲಿ ವಿಭಾಗೀಯ ಕಛೇರಿಗಳಿವೆ, ಬೆಂಗಳೂರಿನ ಮಲ್ಲೇಶ್ವರಂನ ಮುಖ್ಯ ಕಛೇರಿಯಲ್ಲಿಯೇ ಬೆಂಗಳೂರು ವಿಭಾಗದ ಕಛೇರಿಯೂ ಇದೆ.

ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಮಂಡಳಿಯ ವತಿಯಿಂದ ಜರುಗುವ 10ನೇ ತರಗತಿಯ ಪರೀಕ್ಷೆಗಳಿಗೆ ಸುಮಾರು 8.5 ಲಕ್ಷ ಮಕ್ಕಳು ಹಾಗೂ ಜೂನ್ ತಿಂಗಳಿನಲ್ಲಿ ನಡೆಯುವ ಪೂರಕ ಪರೀಕ್ಷೆಗಳಿಗೆ ಸುಮಾರು 2.2 ಲಕ್ಷ ಮಕ್ಕಳು ಹಾಜರಾಗುತ್ತಿದ್ದಾರೆ.

ನಿರ್ದೇಶಕರು (ಪರೀಕ್ಷೆಗಳು) ರವರು ಎಸ್.ಎಸ್.ಎಲ್.ಸಿ ಪರೀಕ್ಷೆಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಉಸ್ತುವಾರಿಯನ್ನು ನೋಡಿಕೊಂಡರೆ ಇತರೆ ಪರೀಕ್ಷೆಗಳ ನಿರ್ವಹಣೆಯನ್ನು ನಿರ್ದೇಶಕರು (ಇತರೆ ಪರೀಕ್ಷೆಗಳು) ನೋಡಿಕೊಳ್ಳುತ್ತಾರೆ.

ಮಂಡಳಿಯಲ್ಲಿ ಆಡಳಿತ ವಿಭಾಗ, ಲೆಕ್ಕಪತ್ರ ಶಾಖೆ,ಟೆಂಡರ್ ಗಳ ನಿರ್ವಹಣೆ, ಮೌಲ್ಯಮಾಪನ ಹಾಗೂ 34 ಜಿಲ್ಲೆಗಳಿಗಾಗಿ 09 ಪರಿಶೀಲನಾ ಶಾಖೆಗಳಿವೆ. ಗಣಕ ಶಾಖೆಯು ಪರೀಕ್ಷೆಗಳ ನಿರ್ವಹಣೆಯನ್ನು ಗಣಕೀಕೃತವಾಗಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

2017-18 ನೇ ಸಾಲಿನಿಂದ ಮಂಡಳಿಯ ಪರೀಕ್ಷೆಗಳಿಗೆ ಸಂಬಂಧಿಸಿದ ಅನೇಕ ಚಟುವಟಿಕೆಗಳನ್ನು ಡಿಜಿಟಲೀಕರಿಸಲಾಗುತ್ತಿದೆ. ಪರೀಕ್ಷೆಗಳಿಗೆ ನೋಂದಣಿ, ಪ್ರವೇಶ ಪತ್ರಗಳ ವಿತರಣೆ ಮತ್ತು ಫಲಿತಾಂಶ ಪ್ರಕಟಣೆಯನ್ನು ಅಂತರ್ಜಾಲ ಆಧಾರಿತ ಸೇವೆಗಳನ್ನಾಗಿ ಪರಿವರ್ತಿಸಲಾಗಿದೆ. ಮೌಲ್ಯಮಾಪನ ಕೇಂದ್ರಗಳಿಂದ ಅಂಕಗಳನ್ನು ಸಹ ಅತ್ಯಾಧುನಿಕ ವಿಧಾನದಲ್ಲಿ ಅಂತರ್ಜಾಲದ ಮೂಲಕ ಮಂಡಳಿಗೆ ರವಾನಿಸಲಾಗುತ್ತಿದ್ದು ಫಲಿತಾಂಶ ಪ್ರಕಟಣೆಯನ್ನು ಕ್ಷಿಪ್ರಗತಿಯಲ್ಲಿ ನಿರ್ವಹಿಸಲು ಸಾಧ್ಯವಾಗಿದೆ. ವಿದ್ಯಾರ್ಥಿಗಳಿಗೆ ಎಸ್.ಎಂ.ಎಸ್ ಸಂದೇಶದ ಮೂಲಕ ಫಲಿತಾಂಶಗಳನ್ನು ನೀಡಲಾಗುತ್ತಿದೆ. ಡಿಜಿಲಾಕರ್ ಆಪ್ ಬಳಸಿ ಅಂಕಪಟ್ಟಿಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ.

ಕರ್ನಾಟಕ ಶಾಲಾ ಗುಣಮಟ್ಟ, ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಮಂಡಳಿಯ ಪ್ರಮುಖ ವಿಭಾಗವಾಗಿದೆ. ಈ ವಿಭಾಗವು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ವಿಭಾಗಗಳ ಶಿಕ್ಷಣದ ಗುಣಮಟ್ಟವನ್ನು ವಾರ್ಷಿಕ ಸಮೀಕ್ಷಾ ಕಾರ್ಯಗಳ ಮೂಲಕ ನಿರ್ವಹಿಸುತ್ತಿದೆ.

ಹೆಚ್ಚಿನ ವಿವರಗಳಿಗೆ ಹಾಗೂ ಸೇವೆಗಳಿಗಾಗಿ ಮಂಡಳಿಯ ಜಾಲತಾಣವನ್ನು ಅವಲೋಕಿಸಬಹುದಾಗಿದೆ. ಸಂಪರ್ಕಿಸಬೇಕಾದ ವಿವರ ಮೆನು ಮೂಲಕ ತಮ್ಮ ಅಭಿಪ್ರಾಯಗಳನ್ನು ಸಂಬಂಧಿಸಿದ ಶಾಖೆಗಳಿಗೆ ಇ-ಮೇಲ್ ಮೂಲಕ ಕಳುಹಿಸಬಹುದಾಗಿದೆ.

Top| Designed & Developed by KSEEB Bangalore