ಪ್ರಚಲಿತ ಸುದ್ದಿಗಳು

ABOUT US


ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 1966 ರಲ್ಲಿ ಸ್ಥಾಪಿತವಾಗಿದ್ದು, ಎಸ್.ಎಸ್.ಎಲ್.ಸಿ. ಹಾಗೂ ಇತರೆ ಪರೀಕ್ಷಗಳನ್ನು ನಡೆಸುತ್ತಿದೆ. ಪ್ರತಿ ವರ್ಷ ಅಭ್ಯರ್ಥಿಗಳ ಸಂಖ್ಯೆ ಹೆಚ್ಚುತ್ತಲಿದೆ.

ಪ್ರತಿ ವರ್ಷ ಎಸ್.ಎಸ್.ಎಲ್.ಸಿ ಯಲ್ಲಿ ಏಪ್ರಿಲ್ ಮಾಹೆಯಲ್ಲಿ 8.50 ಲಕ್ಷ ಹಾಗೂ ಜೂನ್ ಮಾಹೆಯಲ್ಲಿ 1.50 ಲಕ್ಷ ಅಭ್ಯರ್ಥಿಗಳ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಮಂಡಳಿಯು ಮೌಲ್ಯಮಾಪನೆ ಪದ್ದತಿ ಹಾಗೂ ಫಲಿತಾಂಶಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ವಿಭಾಗೀಯ ಕಛೇರಿಗಳನ್ನು ಪ್ರಾರಂಭಿಸಿದೆ. ಇದರಿಂದ ಪರೀಕ್ಷೆ ಹಾಗೂ ಅದರ ಸಂಬಂಧಿತ ಕೆಲಸಗಳು ಈ ವಿಕೇಂದ್ರೀಕರಣ ದಿಂದ ಮಂಡಳಿಯ ಕಾರ್ಯ ಸುಲಭ ಹಾಗೂ ಸುಸೂತ್ರವಾಗಿ ನಡೆಯುತ್ತಿದೆ. ಇದರಿಂದ ಅಭ್ಯರ್ಥಿಗಳು ಸಹ ತಮ್ಮ ಅಹವಾಲುಗಳನ್ನು ವಾಸಸ್ಥಳದ ಹತ್ತಿರದಲ್ಲೇ ಪರಿಹಾರಗಳು ದೊರೆಯುವಂತಾಗುತ್ತದೆ. ಪರೀಕ್ಷೆಗೆ ಕುಳಿತುಕೊಳ್ಳುವ ಎಲ್ಲಾ ಅಭ್ಯರ್ಥಿಗಳ ಭಾವಚಿತ್ರಗಳನ್ನು ಪ್ರವೇಶ ಪತ್ರಗಳಲ್ಲಿ ಹಾಗೂ ಅಂಕ ಪಟ್ಟಿಗಳಲ್ಲಿ ಮುದ್ರಿಸುವುದು ಒಂದು ಸಾಧನೆಯೇ ಆಗಿದೆ.

ಮಂಡಳಿಯು ಪುನರಾವರ್ತಿತ ಅಭ್ಯರ್ಥಿಗಳಿಗೆ ಅದೇ ವರ್ಷದ ಜೂನ್ ಮಾಹೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಡಿಕೊಟ್ಟಿರುವುದು ಗಣನೀಯವಾದ ಸಾಧನೆಯಾಗಿದೆ. ಇದರಿಂದ ಅಭ್ಯ್ರಥಿಗಳು ಅದೇ ಶೈಕ್ಷಣಿಕ ವರ್ಷದಲ್ಲಿ ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಮುಂದುವರೆಸಲು ಅವಕಾಶ ಒದಗಿಸಲಾಗಿದೆ. ಇದು ನಮ್ಮ ದೇಶದಲ್ಲಿ ಮೊದಲನೇಯ ಬಾರಿಗೆ ಪ್ರಾರಂಭವಾದ ಪ್ರಯತ್ನವಾಗಿದೆ.